'ಮಂದಾರ' ಇದು ಪ್ರಾಯೋಗಿಕ ಪತ್ರಿಕೆಯಾಗಿದ್ದು, ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರ ಮಾರ್ಗದರ್ಶನದಲ್ಲಿ ಪ್ರಕಟವಾಗುತ್ತಿದೆ. ಮುದ್ರಣ ಮತ್ತು ಡಿಜಿಟಲ್ ಎರಡೂ ಆವೃತ್ತಿಯನ್ನು ಹೊಂದಿರುವ ಈ ಪತ್ರಿಕೆ ಕಲೆ, ಸಾಹಿತ್ಯ, ಪರಿಸರ, ಪ್ರವಾಸ, ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ ಮುಂತಾದ ವಿಷಯಗಳ ಕುರಿತು ವಿದ್ಯಾರ್ಥಿಗಳು ಮತ್ತು ಇತರ ಲೇಖಕರು ಬರೆದ ಬರಹಗಳನ್ನು ಪ್ರಕಟಿಸಲಿದೆ. ಬಿಬಿಎ ಅಂತಿಮ ವರ್ಷದ ವಿದ್ಯಾರ್ಥಿ ಚಂದನ ಭಟ್ ಕೋಣೆಮನೆ ಮತ್ತು ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿ ಎಂ ಎಸ್ ಶೋಭಿತ್ ಈ ಪತ್ರಿಕೆಯ ಸಂಪಾದನೆ ಮತ್ತು ಪ್ರಕಟಣೆಯ ಜವಾಬ್ದಾರಿ ಹೊತ್ತಿದ್ದಾರೆ. ಓದುಗರಿಗೆ ಅತ್ಯುತ್ತಮ ವಿಷಯಗಳನ್ನು ನೀಡಬೇಕೆನ್ನುವ ಇರಾದೆಯನ್ನು ಈ ತಂಡ ಹೊಂದಿದೆ.