ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಮತ್ತು ಕರಾವಳಿಯ ಕೃಷಿಕರಿಗೆ, ತೋಟದವರಿಗೆ ವನ್ಯಪ್ರಾಣಿಗಳಾದ ಹಂದಿ, ಮುಳ್ಳಕ್ಕಿ ಹಾವಳಿ ಬಹಳ. ಅಷ್ಟೇ ಅಲ್ಲದೇ ಮಂಗನ ಹಾವಳಿಯೂ ಕೂಡ ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಕೃಷಿಕರ ಈ ಸಮಸ್ಯೆಯನ್ನು ಗಮನಿಸಿ ಮಂಗಗಳ ಉಪಟಳಕ್ಕೆ ಹೊಸ ಉಪಕರಣ ಕಂಡುಹಿಡಿದಿದ್ದಾರೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಕೆ.ಸುಬ್ಬರಾವ್‌.

ಗನ್‌ ತಯಾರಿಸುವ ಸಲುವಾಗಿಯೇ ಕಾರ್ಖಾನೆಯಿಂದ ವಿಶೇಷವಾದ ಪೈಪ್‌ ತರಿಸುವ ಇವರು, ವಿಶಿಷ್ಠ ರೀತಿಯಲ್ಲಿ ಗನ್‌ ಸಿದ್ಧಪಡಿಸಿದ್ದಾರೆ. ಮಾರ್ಕೆಟ್‌ನಲ್ಲಿ ದೊರೆಯುವ ಏರ್‌ಗನ್‌ಗಳು ಒಂದೇ ಚಿಕ್ಕ ಗುಂಡು ಹಾರಿಸುವುದಲ್ಲದೇ ಗನ್‌ನ ಶಬ್ದ ಕೂಡ ಕಡಿಮೆ. ಅದೆಲ್ಲದಕ್ಕಿಂತ ಈ ಉಪಕರಣದ ಬೆಲೆಯೂ ಕಡಿಮೆ ಪರಿಣಾಮ ಖಚಿತ ಎಂಬುದು ಬಳಸಿದ ರೈತರ ಅಭಿಪ್ರಾಯ. 1500 ರೂ.ಗಳಿಗೆ ಒಂದು ಗನ್‌ ಜೊತೆ ಸ್ಪ್ರೇ ಕೂಡ ದೊರೆಯಲಿದೆ. ಅದನ್ನು 350 ಸಲ ಪ್ರಯೋಗಿಸಬಹುದು.