ಸೋಲೇ ಗೆಲುವಿನ ಮೆಟ್ಟಿಲು ಎಂದು ತಿಳಿದ ಕಲಾವಿದನೊಬ್ಬ ಇಂದು ರಾಷ್ಟ್ರ ಮಟ್ಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ. ಕಾಗದದಲ್ಲಿ ಚಿತ್ರವನ್ನು ಮೂಡಿಸುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾರೆ.


ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಬಡ ಕುಟುಂಬದ ಪ್ರಹ್ಲಾದ್ ಹೆಗಡೆಯೇ ಇಂತಹ ಕಲಾವಿದ. ಎಂಬಿಎ ಪದವೀಧರರಾದ ಇವರು ತಾನು ಕಲಾವಿದನಾಗಿ ಹೊರಹೊಮ್ಮಬಹುದು ಎಂದು ಭಾವಿಸಿರಲಿಲ್ಲ.ಒಂದು ದಿನ ಕಾಗದವನ್ನು ತೆಗೆದುಕೊಂಡು ಮನಬಂದಂತೆ ಕತ್ತರಿಸಿದಾಗ ಒಂದು ಸುಂದರವಾದ ಚಿತ್ರ ಮೂಡಿತು.ನಂತರದ ದಿನಗಳಲ್ಲಿ ಅವರು ಇದನ್ನೇ ತನ್ನ ಹವ್ಯಾಸವಾಗಿ ಬೆಳೆಸಿಕೊಂಡರು.

ಪ್ರಾರಂಭದಲ್ಲಿ ಮರ ಗಿಡ ಬಳ್ಳಿ ಮತ್ತು ಹೂಗಳನ್ನು ಕತ್ತರಿಸಿ ರೂಪ ಕೊಡುತ್ತಾ ಸ್ವತಃ ಪರಿಣಿತಿ ಪಡೆಯುತ್ತಾರೆ.ಈ ಕಲೆಯಲ್ಲೆ ಆಸಕ್ತಿ ತೋರಿ ಪ್ರಹ್ಲಾದ್ ತನ್ನ ಕೆಲಸವನ್ನು ತೊರೆದು ಸಂಪೂರ್ಣವಾಗಿ ಪೇಪರ್ ಕಟಿಂಗ್ ಆರ್ಟ್ಸ್ ನಲ್ಲಿ ತೊಡಗಿಕೊಳ್ಳುತ್ತಾರೆ.ಇಂದು ವಿಭಿನ್ನ ಪ್ರಕಾರದ ಚಿತ್ರಗಳನ್ನು ರಚಿಸಿ ಉನ್ನತ ಶ್ರೇಣಿಯ ಕಲಾವಿದನನ್ನಾಗಿ ಗುರುತಿಸಿಕೊಂಡು ಸಾಧಕರಾಗಿದ್ದಾರೆ.


ಇವರ ಚಿತ್ರಗಳಿಗೆ ವೆಂಕಟಪ್ಪ ಆರ್ಟ್ ಗ್ಯಾಲರಿ ಮತ್ತು ಚಿತ್ರ ಸಂತೆಗಳಲ್ಲಿ ಭಾರಿ ಬೇಡಿಕೆಗಳಿವೆ.ತಾನು ಕಲಿತ ವಿದ್ಯೆಯನ್ನು ಇತರರಿಗೂ ಹೇಳಿಕೊಡುತ್ತಿದ್ದಾರೆ.ಈ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕೆಂಬುದು ಇವರ ಮಹದಾಶೆ.

"ಏಕಾಗ್ರತೆ ಬಹುಮುಖ್ಯ"
ಕಾಗದವನ್ನು ಕತ್ತರಿಸಿ ಚಿತ್ರಗಳನ್ನು ರಚಿಸಲು ತಾಳ್ಮೆ ಮತ್ತು ಏಕಾಗ್ರತೆ ಬಹುಮುಖ್ಯ.ಕ್ಲಿಷ್ಟಕರವಾದ ದೇವರ ವಿಗ್ರಹಗಳ ಚಿತ್ರಗಳನ್ನು ರಚಿಸಲು 2 ರಿಂದ 3 ತಿಂಗಳುಗಳ ಕಾಲಾವಕಾಶ ಬೇಕು.
ಪ್ರಹ್ಲಾದ್ ಹೆಗಡೆ, ಕಲಾವಿದ


ಪ್ರಶಸ್ತಿಗಳು :-
ವನ್ಯಜೀವಿ ವಾರ್ಷಿಕ ಕಾರ್ಯಕ್ರಮ 2018 ರಲ್ಲಿ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಇವರ ಚಿತ್ರಗಳು ಪ್ರದರ್ಶಿಸಲ್ಪಟ್ಟಿತು.ಅಲ್ಲಿ ಪಕ್ಷಿಗಳ ವಿನ್ಯಾಸಗೊಳಿಸುವಲ್ಲಿ ಅವರ ಪರಿಣಿತಿ ಗುರುತಿಸಿ ಏವಿಯನ್ ವರ್ಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

-ಎಂ.ಎಸ್.ಶೋಭಿತ್ ಮೂಡ್ಕಣಿ


(ಜೂನ್ 25, 2018 ರ ಜನಮಾಧ್ಯಮ ಪತ್ರಿಕೆಯಲ್ಲಿ ಪ್ರಕಟಿತ ಲೇಖನ.)