ಎಕ್ಸಾಮು! ಅಂಗನವಾಡಿಯ ಮೆಟ್ಟಿಲು ಹತ್ತಿದಾಗಿನಿಂದ ಹಿಡಿದು ಡಿಗ್ರಿಯವರೆಗೂ ನೂರಾರು ಪೇಪರ್ ಗಳನ್ನು ಬರೆದು ಬಿಸಾಕಿರಬೇಕು ನಾವು. ಶಾಲೆಗಳಲ್ಲಿ ಪರೀಕ್ಷೆಯ ಬಗ್ಗೆ ಇದ್ದ ಹೆದರಿಕೆಯೋ ಭಯ ಭಕ್ತಿಯೋ ಅವೆಲ್ಲಾ ಕಾಲೇಜಿಗೆ ಬರುವವರೆಗೆ ಕ್ರಮೇಣ ಕಡಿಮೆಯಾಗುತ್ತಾ ಬಂದು ಪಾಸಿಂಗ್ ಮರ‍್ಕ್ಸು ಎಷ್ಟು ಮಾರಾಯ? ಎಂದು ಕೇಳುವಲ್ಲಿಗೆ ಬಂದು ತಲುಪುತ್ತದೆ. ಬಹಳಷ್ಟು ಪೇಪರ್ ಗಳನ್ನು ಬರೆಯುವ ಸಂರ‍್ಭದಲ್ಲಿ ನಾವ್ಯಾಕೆ ಒಂದು ಧಾರಾವಾಹಿಗೆ ಕತೆ ಬರೆಯಬಾರದು? ಎನ್ನುವ ಫೀಲಿಂಗೂ ಬರುತ್ತದೆ. ಓದಿದ ಒಂದೆರಡು ಸಾಲನ್ನೇ ಬಹಳಷ್ಟು ಎಳೆದು ಬರೆಯುವರಲ್ಲವೇ ನಾವು!
ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಪರೀಕ್ಷೆಯ ದಿನಗಳೆಂದರೆ ಒಂಥರಾ ಹಬ್ಬವಿದ್ದಂತಿರುತಿತ್ತು. ಮಾರಿ ಹಬ್ಬನೋ ಇನ್ಯಾವ ಹಬ್ಬನೋ ಎಂದು ಮಾತ್ರ ಕೇಳಬೇಡಿ! ಪರೀಕ್ಷೆ ಹತ್ತಿರ ಬರುತ್ತಿದ್ದಂತೇ ಮನೆ ದೇವರು, ಊರಲ್ಲಿರೋ ದೇವ್ರುಗಳೆಲ್ಲಾ ನೆನಪಾಗಿಬಿಡುತ್ತವೆ. ಹಾಗಂತ ಎಲ್ಲರ ಕೋರಿಕೆಗಳು ಒಂದೇ ಇರಲ್ಲ! ಒಬ್ಬೊಬ್ಬರದ್ದು ಒಂದೊಂದು ರೀತಿಯ ರ‍್ಜಿಗಳು. "ದೇವ್ರೇ, ಈ ಬಾರಿ ಕ್ಲಾಸಿಗೆ ನಾನೇ ಫಸ್ಟ್ ಬರುವ ಹಾಗೆ ಮಾಡಿಬಿಡು", "ದೇವ್ರೇ, ಇದೊಂದೇ ಬಾರಿ ನೀನೇ ಏನಾದರೂ ಮಾಡಿ ಎಲ್ಲಾ ವಿಷಯಗಳಲ್ಲಿ ಪಾಸಾಗುವಂತೆ ಮಾಡು. ಮುಂದಿನ ಬಾರಿ ನಾನೇ ಓದಿ ಪಾಸಾಗುತ್ತೇನೆ" ಎನ್ನುವ ಪ್ರತಿ ರ‍್ಷ ರಿಪೀಟ್ ಆಗುವ ಡೈಲಾಗ್ ಗಳು. ಮತ್ತೆ ಒಂದಿಷ್ಟು ಹರಕೆಗಳು. ಪ್ರತಿ ರ‍್ಷ ಸಂಪ್ರದಾಯದಂತೆ ಕ್ಲಾಸಿಗೆ ಟಾಪ್ ಬರೋ ಹುಡುಗಿಯರು.
ಪರೀಕ್ಷೆಗೆ ಓದಬೇಕು ಅಂತ ತೋಟಕ್ಕೆ ಹೋಗಿ ಅಲ್ಲಿ ಅಲೆದಾಡುತ್ತಾ, ಪೇರಳೆಯನ್ನೋ, ರಾಜನೆಲ್ಲಿಯನ್ನೋ ತಿನ್ನುತ್ತಾ ಯಾವ ಕೆಲಸಕ್ಕೆ ಹೋಗಿದ್ದೆ ಎನ್ನುವುದನ್ನೇ ಮರೆತುಬಿಡುವುದು. ಎಕ್ಸಾಮ್ ದಿನವಂತೂ ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ಯೂನಿಫರ‍್ಮ್ ಧರಿಸಿ ತೆಳ್ಳೇವು ತಿಂದು ಪಟ್ಟಗೆ ರೆಡಿಯಾಗಿ ಮನೆಯ ದೇವ್ರಿಗೂ, ಹಿರಿಯರಿಗೂ ಒಂದು ಉದ್ದಂಡ ನಮಸ್ಕಾರ ಹಾಕಿ ಹಿಂದಿನ ದಿನವೇ ತಯಾರಾಗಿ ಕೂತಿದ್ದ ದಪ್ತಾರವನ್ನು ಹೆಗಲಿಗೇರಿಸಿ ಶಾಲೆಗೆ ಹೊರಟರೆ, ದಾರಿಯಲ್ಲೆಲ್ಲಾ ತಲೆಯಲ್ಲಿ ಗಿರಕಿ ಹಾಕುವ ಫರ‍್ಮುಲಾಗಳು, ಇಸ್ವಿಗಳು, ಲೇಖಕರ ಹೆಸರುಗಳು ಇನ್ನೇನೆಲ್ಲಾ!
ಒಂದಿಷ್ಟು ಜನ ಪರೀಕ್ಷೆ ಶುರುವಾದಾಗಿನಿಂದ ಮುಗಿಯುವವರೆಗೂ ತಲೆಬಗ್ಗಿಸಿಕೊಂಡೇ ರ‍್ರಾಬರ‍್ರಿ ಗೀಚುತ್ತಿದ್ದರೆ, ಇನ್ನೂ ಕೆಲವಷ್ಟು ಜನ ಪಕ್ಕದಲ್ಲಿರುವವರ ಪೇಪರ್ ನಲ್ಲಿ ಯಾವುದಾದರೂ ಉತ್ತರ ಕಾಣುವುದೇ ಎಂದು ದರ‍್ಬೀನು ಕಣ್ಣಿನಿಂದ ಹುಡುಕುತ್ತಿರುತ್ತಾರೆ. ಅಂತೂ ಕೊನೆಯ ಬೆಲ್ ಕೇಳಿಸುವುದರ ಜೊತೆಗೆ ಪರೀಕ್ಷೆ ಮುಗಿದು ಹೊರ ಬಂದಾಗ ಅಲ್ಲಲ್ಲಿ ವಿದ್ಯರ‍್ಥಿಗಳು ಗುಂಪು ಕಟ್ಟಿಕೊಂಡು ಕ್ವಷ್ಚನ್ ಪೇಪರ್ ನ ಪೋಸ್ಟ್ ಮರ‍್ಟಮ್ ಮಾಡಲಿಕ್ಕೆ ಶುರುಮಾಡುತ್ತಾರೆ. ಅಳೆದೂ ತೂಗಿ ಎಷ್ಟು ಅಂಕಗಳು ಬೀಳಬಹುದು ಎಂದು ರೀರ‍್ಚ್ ಮಾಡುವ ಸಂರ‍್ಭ ಅದು!
ವರ‍್ಷಿಕ ಪರೀಕ್ಷೆ ಬರುವಂಥದ್ದು ಹೋಳಿ ಹಬ್ಬದ ಸಂರ‍್ಭದಲ್ಲಿ. ಆಗ ನಮ್ಮ ಹಲವಾರು ದೋಸ್ತರು ಕರಡಿ ವೇಷ ಹಾಕಿಕೊಂಡು ಊರಲ್ಲಿರೋ ಮನೆಗಳಿಗೆಲ್ಲಾ ಹೋಗಿ ಕುಣಿಯುತ್ತಿದ್ದರು. ಕರಡಿ ವೇಷ ಹಾಕಲಿಕ್ಕೆ ಬೇಕಾದ ಪೇಪರನ್ನು ಎಲ್ಲಿಂದ ತರಬೇಕು? ಇನ್ನೆಲ್ಲಿಂದ.. ಶಾಲೆಯಲ್ಲಿ ಕೊಟ್ಟ ಪಠ್ಯಪುಸ್ತಕ ಇದ್ಯಲ್ಲ! ರ‍್ಷಪರ‍್ತಿ ಓದಿದ್ದೆಲ್ಲಾ ಮೈಮೇಲೆ ವೇಷ ಭೂಷಣವಾಗಿರುತ್ತಿತ್ತು. ಕೆಲವರು ಈ ಕರಡಿ ವೇಷದಲ್ಲಿ ಮುಳುಗಿದ್ದರೆ ಇನ್ನೂ ಕೆಲವರು ಗೇರು, ಜಂಬುನೇರಳೆ ಮರದ ಮೇಲಿರುತ್ತಿದ್ದರು. ಎಕ್ಸಾಮು ಮುಗಿದ ನಂತರ ಏನೇನು ಮಾಡುವುದು? ಮನೆಯಲ್ಲಿಯೇ ಇರುವುದಾ, ಅಜ್ಜನಮನೆಗೆ ಹೋಗುವುದಾ? ಹೀಗೆಲ್ಲಾ ಲೆಕ್ಕಾಚಾರವಿರುತ್ತಿತ್ತು. ರಜಾದಿನದಲ್ಲಿ ಮುಗಿಸಿ ಮಕ್ಳಾ ಎಂದು ಕೊಡುತ್ತಿದ್ದ ಹೋಮ್ ರ‍್ಕ್ ಗಳನ್ನು ನಾವು ಮುಗಿಸುವುದು ಮಾತ್ರ ಬೇಸಿಗೆ ರಜೆ ಮುಗಿದು ಇನ್ನೇನು ಶಾಲೆ ಶುರು ಆಗುತ್ತದೆ ಎನ್ನುವ ಸಂರ‍್ಭದಲ್ಲಾಗಿತ್ತು.
ಪರೀಕ್ಷೆಯ ದಿನಗಳು ಕೆಲವರಿಗೆ ಮೋಜು ಮಸ್ತಿಯ ಸಮಯ, ಕೆಲವರಿಗೆ ಮನೆಯಲ್ಲಿ ಟಿವಿ ಕನೆಕ್ಷನ್ ಕಟ್ಟಾಗುವ ಟೈಮು, ಇನ್ನೂ ಕೆಲವರಿಗೆ ಫೇಸ್ ಬುಕ್, ಇನ್ಸ್ಟಾಗ್ರಾಮ್ ಎಲ್ಲಾ ಡೀ ಆ್ಯಕ್ಟಿವೇಟ್ ಮಾಡುವ ಸಮಯ. ಈ ಬಾರಿ ಆದರೂ ಪಾಸ್ ಆಗಲಿ ಎಂದು ದೇವಸ್ಥಾನದಲ್ಲಿ ರೌಂಡ್ ಹೊಡೆಯುವ ಕಾಲ. ಒಂದು ಕ್ಲಾಸಿನಿಂದ ಇನ್ನೊಂದು ಕ್ಲಾಸಿಗೆ ಬಡ್ತಿ ಪಡೆಯುವ ಸಮಯವೂ ಹೌದು ಅದು.